ಆತ್ಮೀಯ ಸ್ನೇಹಿತರೆ,
ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶಾಲೆಯ ವರದಿಗೆ ಈ ಮುನ್ನುಡಿ ಬರೆಯಬೇಕೆಂದಾಗ, ಒಂದು ರೀತಿಯಲ್ಲಿ “gush of emotions” ಅನ್ನುವಹಾಗೆ ಒಂದು ರೀತಿಯ ಭಾವೋದ್ವೇಗ. ನವೆಂಬರ್ ೨೦೨೧ರಲ್ಲಿ ನಮ್ಮ ಮಕ್ಕಳಿಗೆ ಕನ್ನಡ ಕಲಿಸಬೇಕೆಂಬ ಒಂದು ಸಂಕಲ್ಪ ಇವತ್ತಿಗೆ ಎರಡು ಶೈಕ್ಷಣಿಕ ವರ್ಷಗಳು ತುಂಬಿರಿವುದು ಸಂತೋಷ ಹಾಗು ತೃಪ್ತಿಕರ. ನೀವು ಓದುತ್ತಿರುವಂತೆ, "ಆಡುತ ನಲಿ-ಕನ್ನಡ ಕಲಿ"ಎಂಬ ಧ್ಯೇಯವಾಕ್ಯದಲ್ಲಿ “ನಲಿ-ಕಲಿ” ಮಾದರಿಯನ್ನು ಅಳವಡಿಸಿಕೊಂಡಿರುವ ನಮ್ಮ ಶಾಲೆಯ ಪ್ರಸಕ್ತ ಸಾಲಿನ ಕೆಲವೊಂದು ಮುಖ್ಯಾಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ:
"ನಮ್ಮ ಕನ್ನಡ ಶಾಲೆ ಬವೇರಿಯ" ಈಗ ಮರುನಾಮಕರಣಗೊಂಡು ಈಗ "ನಮ್ಮ ಕನ್ನಡ ಶಾಲೆ ಜರ್ಮನಿ"
ಮಕ್ಕಳು Munich (Dachau, Unterhaching, Unterschleissheim, Freising), Ingolstadt, Regensburg, Erlangen, Nürnberg, Fürth, Stuttgart, Bodensee, Mannheim, Heidelberg, Braunschweig, Hamburg ಹಾಗು Dortmund ನಗರಗಳಿಂದ ಸೇರಿದ್ದಾರೆ
ಪಕ್ಕದ Salzburg, Austria ನಿಂದನೂ ಸೇರಿರುವುದು ವಿಶೇಷ
Munich ಶಾಲೆ (ಉಪಸ್ಥಿತ ಶಾಲೆ) ಸಿರಿಗನ್ನಡಕೂಟ ಮ್ಯೂನಿಕ್ ಸಹಕಾರದೊಂದಿಗೆ ಹಾಗು online ಶಾಲೆ ಎರಡು ಶೈಕ್ಷಣಿಕ ವರ್ಷ ಪೂರೈಸಿವೆ
ಕಳೆದ February ೨೦೨೪ರಿಂದ Erlangenನಲ್ಲಿ ಕನ್ನಡ ಕೂಟ ಫ್ರಾಂಕೊನಿಯ ಸಹಯೋಗದೊಂದಿಗೆ ಉಪಸ್ಥಿತ ಶಾಲೆ ಆರಂಭ
ಈ 3 ಶಾಲೆಯಿಂದ ಒಟ್ಟು 78 ವಿದ್ಯಾರ್ಥಿಗಳಿದ್ದಾರೆ
3 ಗುಂಪುಗಳಿದ್ದು ; ಆರಂಭಿಕ ಹಂತದ ಮಕ್ಕಳು ಕನ್ನಡ ವರ್ಣಮಾಲೆಯ ಅಕ್ಷರಗಳ ಅಭ್ಯಾಸ, intermediate ಗುಂಪಿನ ಮಕ್ಕಳು ವರ್ಣಮಾಲೆಯ ಅಕ್ಷರಗಳನ್ನು ಬರೆಯುವುದರ ಜೊತೆ 2-3-4-5 ಅಕ್ಷರಗಳ ಪದಗಳ ಬರವಣಿಗೆ ಹಾಗು advanced ಮಕ್ಕಳ ಗುಂಪಿನವರು ಕಾಗುಣಿತವನ್ನು ಕಲೆತು ಸಜಾತಿ ಒತ್ತಕ್ಷರವನ್ನು ಕಲಿತಿದ್ದಾರೆ.
10 ತಿಂಗಳ ಶೈಕ್ಷಣಿಕ ಸಾಲಿನಲ್ಲಿ, 40 ತರಗತಿಗಳು ನಡೆದಿದ್ದು, 3 ಪ್ರಾರ್ಥನೆ, 2 ಹಾಡು, 2 ಕಥೆ, 2 ನೃತ್ಯ ಹಾಗು ಹಲವಾರು ನಮ್ಮ ಆಟಗಳನ್ನು ಹೇಳಿಕೊಡಲಾಗಿದೆ
3-5 ವರ್ಷದ ಆರಂಭಿಕ ಹಂತದ ಮಕ್ಕಳ ಕಲಿಕೆಯ ಹಾದಿಯನ್ನು ಇನ್ನಷ್ಟು ಸುಗಮಗೊಳಿಸಲು ನಮ್ಮದೆಯಾದ „ಶಿಶುವಿಹಾರ“ ಗುಂಪನ್ನು ಶುರುಮಾಡುವ ಆಲೋಚನೆ
ಇವೆಲ್ಲವನ್ನೂ ಸ್ವ-ಪ್ರೇರಿತರಾಗಿ, ವಾರದಲ್ಲಿ ವೃತ್ತಿಜೀವನದಲ್ಲಿ ವಾರಾಂತ್ಯದಲ್ಲಿ ಕನ್ನಡ ಶಾಲೆಗೆ ದುಡಿಯುತ್ತಿರುವ ನಮ್ಮ 16 ಶಿಕ್ಷಕರು ಹಾಗು 5 ಆಡಳಿತ ತಂಡದವರ ನಿಸ್ವಾರ್ಥ ಸೇವೆ
ಸ್ನೇಹಿತರೆ, ಈ ಎರಡು ವರ್ಷಗಳಲ್ಲಿ ಇಷ್ಟು ಮೈಲಿಗಲ್ಲುಗಳನ್ನು ಮುಟ್ಟಿರುವುದು ಹೆಮ್ಮೆಯ ವಿಷಯವಾದರೂ, ಈ ಪಯಣದ ಹಾದಿ ಅಷ್ಟೇನೂ ಸುಗಮವಾಗಿರಲಿಲ್ಲ. ಬಹಳಷ್ಟು ಅಡ್ಡಿತಡೆ, ಸವಾಲುಗಳು, ಅವರಿವರ ಮಾತುಗಳು, ನಿಂದನೆಗಳಿದ್ದರೂ, ನಮ್ಮ ಶಿಕ್ಷಕರ ಹಾಗು ಕೆಲವು ಪೋಷಕರ ನಿರಂತರ ಬೆಂಬಲ ನಮ್ಮನ್ನು ಇಲ್ಲಿಗೆ ಮುಟ್ಟಿಸಿದೆ. ಜೊತೆಗೆ, ದೈವಬಲ ಹಾಗು ಗುರುಬಲ ನಮಗಿರುವ ರಕ್ಷೆ ಹಾಗು ಸ್ಪೂರ್ತಿ.
ಧನ್ಯವಾದಗಳು. ನಿಮ್ಮೆಲ್ಲರ ಸಹಕಾರ ಹೀಗೆ ಮುಂದುವರೆಯಲಿ, ಆಡುತ ನಲಿಯುತ ಜೆರ್ಮನಿಯಲಿ ನಮ್ಮ ಮುದ್ದುಮಣಿಗಳು ಕನ್ನಡವನ್ನು ಕಲಿಯಲಿ.
ವಿಶ್ವಾಸದೊಂದಿಗೆ,
ರಶ್ಮಿ ನಾಗರಾಜ್
ಶಿಕ್ಷಕರು, ಶಾಲೆಯ ಮುಖ್ಯ ಉಸ್ತುವಾರಿ ಹಾಗು ನಿರ್ವಹಣೆ
ನಮ್ಮ ಕನ್ನಡ ಶಾಲೆ ಜರ್ಮನಿ
✔️ ಕರ್ನಾಟಕ ಸರ್ಕಾರದ "ನಲಿ-ಕಲಿ" ಪಠ್ಯಕ್ರಮ
✔️ ಯಶಸ್ವಿ 3 ನೇ ಶ್ಯಕ್ಷಣಿಕ ವರ್ಷ
✔️ ಒಟ್ಟು 90+ ವಿದ್ಯಾರ್ಥಿಗಳು ಹಾಗು 15+ ಸ್ವಯಂಪ್ರೇರಿತ ಶಿಕ್ಷಕರು
✔️ 2 ಉಪಸ್ಥಿತ ಶಾಲೆಗಳು(ಮ್ಯುನಿಕ್, ಎರ್ಲಾಂಗೆನ್)
✔️ 1 online ಶಾಲೆ (ಪ್ರಸ್ತುತ ಜರ್ಮನಿಯ ಇತರೆ ರಾಜ್ಯಗಳು, ಆಸ್ಟ್ರಿಯಾ ಹಾಗು ನೆಧರ್ಲ್ಯಾಂಡ್ ಮಕ್ಕಳು)
✔️ ಕನ್ನಡ ಭಾಷೆಯ ಜೊತೆ ಮಕ್ಕಳ ಸಮಗ್ರ ಬೆಳವಣಿಗೆಗೆ ಒಂದು ಅವಕಾಶ
Munich :
Erlangen :
Online