Vijaya karnataka article in January 2025
Vijaya karnataka article in January 2025
Prajavani article after MOU
ನಮ್ಮ ಕನ್ನಡ ಶಾಲೆಯ ಆತ್ಮೀಯ ಸ್ನೇಹಿತರೇ,
ಯುಗಾದಿ ಹಬ್ಬದ ಗುಂಗಿನಲ್ಲಿರುವಾಗಲೇ ಇನ್ನೊಂದು ಸಿಹಿ ಸುದ್ದಿ
ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಏಪ್ರಿಲ್ ತಿಂಗಳ "ಜನಪದ" ಮಾಸಿಕದಲ್ಲಿ ನಮ್ಮ ಕನ್ನಡ ಶಾಲೆಯ ಬಗ್ಗೆ ಪ್ರಕಟವಾಗಿರುವ ಅಂಕಣವನ್ನುನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ಸರ್ಕಾರದ ಇನ್ನಿತರೇ ಮಾಹಿತಿ ಹಾಗು ತಿಂಗಳ ಆಗುಹೋಗುಗಳ ಬಗ್ಗೆ ಬಹಳಷ್ಟು ಅಂಕಣಗಳಿದ್ದು, ಅವುಗಳ ಮಧ್ಯೆ ವಿಶೇಷವಾಗಿ ನಮ್ಮ ಶಾಲೆಯ ಬಗ್ಗೆ ಈ ಅಂಕಣ ಪ್ರಕಟವಾಗಿರುವುದು ಬಹಳ ಖುಷಿಯ ಸಂಗತಿ.
ಇಲಾಖೆಯ ಸಿಬ್ಬಂದಿಯವರಿಗೆ, ವಿಶೇಷವಾಗಿ ಶ್ರೀಮತಿ ಬಿ.ಜಿ.ಪೂರ್ಣಿಮಾ ಮೇಡಂ ಹಾಗು ಅಂಕಣವನ್ನು ಬರೆದಿರುವ ಹಿರಿಯ ಪತ್ರಕರ್ತರಾದ ಶ್ರೀ ಎಸ ಆರ್ ಆರಾಧ್ಯ ಸರ್ ಅವರಿಗೆ ಧನ್ಯವಾದಗಳು.
ಶಾಲೆಯ ಈ ಪಯಣದಲ್ಲಿ ಸಹಕರಿಸುತ್ತಿರುವ ನಮ್ಮ ಎಲ್ಲಾ ಶಿಕ್ಷಕ ತಂಡದವರಿಗೆ, ಮುದ್ದು ಮಕ್ಕಳಿಗೆ, ಪೋಷಕರಿಗೆ, ಸಲಹಾ ಮಂಡಳಿಯ ಸದಸ್ಯರಿಗೆ ಹಾಗು ಎಲ್ಲಾ ಶುಭಚಿಂತಕರಿಗೆ ಅನಂತಾನಂತ ಧನ್ಯವಾದಗಳು.
ವಿಶ್ವಾಸದೊಂದಿಗೆ,
ನಮ್ಮ ಕನ್ನಡ ಶಾಲೆ ಜರ್ಮನಿಯ ತಂಡ