ಚಿಲಿಪಿಲಿ ಶಿಶುವಿಹಾರ - Shishuvihaara
ಚಿಲಿಪಿಲಿ ಶಿಶುವಿಹಾರ - Shishuvihaara
2025-26ರ ಶೈಕ್ಷಣಿಕ ವರ್ಷದಿಂದ 3,5-5,5 ವರ್ಷದ ಮಕ್ಕಳಿಗೆ "ಚಿಲಿಪಿಲಿ-ಶಿಶುವಿಹಾರ" ಶುರುಮಾಡಲಾಯಿತು.
"ಆಟದ ಮೂಲಕ ಪಾಠ" ಎಂಬ ಕಲ್ಪನೆಯ ಆಧರಿಸಿ ಮಕ್ಕಳಿಗೆ ಅಕ್ಷರ ಪರಿಚಯಿಸುವುದು, ಪದ್ಯ, ಕಥೆ, ಹಾಡು, ಕರಕುಶಲ ಮತ್ತು ಹಲವಾರು ಆಟಗಳು. ಇವೆಲ್ಲವನ್ನೂ ಕಲಿಸುವ ಮೂಲಕ ಮಕ್ಕಳ ಶಾರೀರಕ, ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಪೋಷಿಸುವಲ್ಲಿ ಗಮನಕೊಡಲಾಗಿದೆ.
ಈ ಶಿಶುವಿಹಾರವನ್ನು ಮ್ಯೂನಿಕ್ ಹಾಗು ಎರ್ಲಾಂಗನ್ ನ ಉಪಸ್ಥಿತ ಶಾಲೆಗಳಲ್ಲಿ ಶುರುಮಾಡಲಾಗಿದೆ. ಆಸಕ್ತ ಪೋಷಕರು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಬಹುದು.