ನಮಸ್ಕಾರ,

ನಮ್ಮ ಕನ್ನಡ ಶಾಲೆ ಜರ್ಮನಿ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಜೂಲೈ ೯ರಂದು ಮ್ಯೂನಿಕ್ ನಲ್ಲಿ  ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿಯವರ ಸಮ್ಮುಖದಲ್ಲಿ ಒಂದು ಚಿಕ್ಕ ಸಂವಾದ ಕಾರ್ಯಕ್ರಮ ನಡೆಯಿತು. ಶಾಲಾ ಮಕ್ಕಳ ಗಣಪತಿ ಸ್ತುತಿಯ ಪ್ರಾರ್ಥನೆಯೊಂದಿಗೆ ದೀಪ ಪ್ರಜ್ವಲನೆಯ ಮೂಲಕ ಪ್ರಾರಂಭವಾಯಿತು.

ಜರ್ಮನಿಯಲ್ಲಿ ನಡೆಯಿತ್ತಿರುವ ಮಕ್ಕಳಿಗಾಗಿ ಕನ್ನಡ ಕಲಿಕಾ ಕಾರ್ಯಕ್ರಮಗಳು, ಅದರ ಅನುಮೋದನೆ ಹಾಗು ಮಾನ್ಯತೆ ಪಡೆಯುವ ಸಾಧ್ಯತೆಗಳು ಮತ್ತು ಯುರೋಪ್-ಜರ್ಮನಿಯಾದ್ಯಂತ ಇನ್ನೂ ಹೆಚ್ಚಿನ ಕನ್ನಡ ಪರ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವ ವಿಚಾರಗಳನ್ನ ಪ್ರಸ್ತಾಪ ಮಾಡಲಾಯಿತು. ಜೊತೆಗೆ, ನಮ್ಮ ಕನ್ನಡ ಶಾಲೆಯ ಚಟುವಟಿಕೆ ಹಾಗು ಕಳೆದ ಎರಡು ವರ್ಷದ ವರದಿಯನ್ನೂ ಪ್ರಸ್ತುತಪಡಿಸಲಾಯಿತು.

ಮ್ಯೂನಿಕ್ ನ ಕನ್ನಡ ಬಳಗದ ಸದಸ್ಯರಿಗೆಲ್ಲ ಮುಂಬರುವ ಡಿಸೆಂಬರ್ ೨೦೨೪ ರ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ಕೊಡುವುದರ ಮೂಲಕ, ಸಾಹಿತ್ಯ ಪರಿಷತ್ತಿನ ಸದಸ್ಯರಾಗುವ ಅವಕಾಶ ಹಾಗು ನಮ್ಮ ಬಳಗವನ್ನು ನೋಂದಾಯಿಸುವ ಪ್ರಕ್ರಿಯೆಯನ್ನು ತಿಳಿಸಿದರು.

ಇದೆ ಸಂದರ್ಭದಲ್ಲಿ, ಅಧ್ಯಕ್ಷರಿಗೆ ನಮ್ಮ ಕನ್ನಡ ಶಾಲೆಯ ಪಠ್ಯಪುಸ್ತಕದ ಒಂದು ಪ್ರತಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಂತಹ ಡಾ. ಮಹೇಶ್ ಜೋಶಿ ಯವರಿಗೆ, ಹಿರಿಯರಿಗೆ ಹಾಗೂ ಮ್ಯೂನಿಕ್ ನ ಎಲ್ಲಾ ಕನ್ನಡ ಬಳಗದ ಸ್ನೇಹಿತರಿಗೆ ಹೃತ್ಪೂರ್ವಕ ವಂದನೆಗಳು.

ವಿಶ್ವಾಸದೊಂದಿಗೆ

ನಮ್ಮ ಕನ್ನಡ ಶಾಲೆ ಜರ್ಮನಿ ತಂಡ