ಎಲ್ಲರಿಗೂ ನಮಸ್ಕಾರ

ನಮ್ಮ ಕನ್ನಡ ಶಾಲೆ ಜರ್ಮನಿ ತಂಡ (NKS Germany) is happy to inform that we are planned an “online ನಲಿ-ಕಲಿ ಕಾರ್ಯಾಗಾರ”  conducted by very well known “Nali-Kali” experts from Karnataka on 23 March 25.

ನಮ್ಮ ಕಾರ್ಯಗಾರ ನಲಿ-ಕಲಿಯಲ್ಲಿ ಭಾಷೆಯ ಮಹತ್ವವನ್ನು, ಕಲಿಕಾ ಗೋಪುರ, ಭಾಷಾ ತಟ್ಟೆಯ ಮೂಲಕ ಸುಲಲಿತವಾಗಿ ಕಲಿಸುವ ವಿಧಾನವನ್ನು ತಿಳಿಸಿದ ಶ್ರೀ ರೇಣುಕಾರಾಧ್ಯ ಪಿ.ಪಿ. ಸಹ ಶಿಕ್ಷಕರು ಸರಕಾರಿ ಪ್ರಾಥಮಿಕ ಶಾಲೆ, ಮುದ್ದಲಿಂಗನ ಕೊಪ್ಪಲು, ಅರಸೀಕೆರೆ ಇವರಿಗೆ ಜರ್ಮನಿ ಕನ್ನಡ ಶಾಲಾ ತಂಡದ ಪರವಾಗಿ ತುಂಬು ಹೃದಯದ ಧನ್ಯವಾದಗಳು .

ಪ್ಯಾನೆಲ್ ಚರ್ಚೆಯಲ್ಲಿ ವರ್ಣಮಾಲೆಯ ಸ್ವರಗಳ ಉಚ್ಚಾರವನ್ನು ಅತ್ಯದ್ಭುತ ರೀತಿಯಲ್ಲಿ ಮನಮುಟ್ಟುವಂತೆ ವಿವರಿಸಿದ  ಶ್ರೀ ಅರಳೇಹಳ್ಳಿ ಅಣ್ಣಪ್ಪ, ಕನ್ನಡ ಅಧ್ಯಾಪಕರು, ಸರಕಾರಿ ಪ್ರೌಢಶಾಲೆ ಅರಕೆರೆ ,ಭದ್ರಾವತಿ ಇವರಿಗೆ  ಜರ್ಮನಿ ಕನ್ನಡ ಶಾಲಾ ತಂಡದ ಪರವಾಗಿ  ತುಂಬು ಹೃದಯದ ಧನ್ಯವಾದಗಳು.

ಮಕ್ಕಳಿಗೆ ಕನ್ನಡ ಶಾಲೆಯ ಕುರಿತು ಒಲವು ಮೂಡಿಸುವ ರೀತಿ ,ಕನ್ನಡ ಭಾಷೆಯ ಸಂವಹನದ ಬಗ್ಗೆ ತಿಳಿಸಿಕೊಟ್ಟ ಶ್ರೀ ಆರ್. ಡಿ. ರವೀಂದ್ರ, ರಾಜ್ಯ ಸಂಪನ್ಮೂಲ ವ್ಯಕ್ತಿ, ಕನ್ನಡ ಅಧ್ಯಾಪಕರು ಸರಕಾರಿ ಪ್ರೌಢಶಾಲೆ, ಲೋಕನಾಥಪುರ ,ಕೊಪ್ಪ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

ಮುಖ್ಯ ಅತಿಥಿಯಾಗಿ ಆಗಮಿಸಿ ಪರಮಪೂಜ್ಯ ಶ್ರೀ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅವರು ತಮ್ಮ ಅಪಾರವಾದ ಜ್ಞಾನವನ್ನು ಅದ್ಭುತವಾದ ನುಡಿಗಳ ಮೂಲಕ ಶಿಕ್ಷಕರಿಗೆ ಒಂದು ಸ್ಪೂರ್ತಿಯ ಚೈತನ್ಯ ತುಂಬಿದ್ದಕ್ಕೆ ನಮ್ಮ ಕನ್ನಡ ಶಾಲೆ ಜರ್ಮನಿ ತಂಡದಿಂದ ಗೌರವಪೂರ್ಣ ಧನ್ಯವಾದಗಳು.

ಕನ್ನಡ ನಲಿ -ಕಲಿ  ಕಾರ್ಯಗಾರದಲ್ಲಿ ಉತ್ಸಾಹದಿಂದ ಭಾಗವಹಿಸಿ ಯಶಸ್ವಿಯಾಗಿ ಮೂಡಿ ಬರಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣೀಭೂತರಾದ ಶಿಕ್ಷಕ ವೃಂದ ,ಸಂಘಗಳ ಪ್ರತಿನಿಧಿಗಳು, ಆಸಕ್ತ ಶಿಕ್ಷಕರಿಗೆ ಜರ್ಮನಿ ಕನ್ನಡ ಶಾಲಾ ತಂಡದ ಪರವಾಗಿ ಹೃದಯಪೂರ್ವಕ ವಂದನೆಗಳು.

ವಿಶ್ವಾಸದೊಂದಿಗೆ

ನಮ್ಮ ಕನ್ನಡ ಶಾಲೆ ಜರ್ಮನಿ ತಂಡ